27
"ವಿದ್ಯಾರಣ್ಯ" ಕನ್ನಡ ವಿಶ್ವವಿದ್ಯಾಲಯಕ್ಕೆ ಇಟ್ಟ ಸಾರ್ಥಕನಾಮ. ಪ್ರಾಕೃತಿಕವಾಗಿ ಮೋಹಕವಾಗಿದ್ದು ತನ್ನ ತಗ್ಗು ದಿಣ್ಣೆಗಳಿಂದ ಕಣ್ಮನ ಸೆಳೆಯುವ ಸುಮಾರು 700 ಎಕರೆಗಳ ವಿ...
"ವಿದ್ಯಾರಣ್ಯ" ಕನ್ನಡ ವಿಶ್ವವಿದ್ಯಾಲಯಕ್ಕೆ ಇಟ್ಟ ಸಾರ್ಥಕನಾಮ. ಪ್ರಾಕೃತಿಕವಾಗಿ ಮೋಹಕವಾಗಿದ್ದು ತನ್ನ ತಗ್ಗು ದಿಣ್ಣೆಗಳಿಂದ ಕಣ್ಮನ ಸೆಳೆಯುವ ಸುಮಾರು 700 ಎಕರೆಗಳ ವಿಸ್ತಾರವಾದ ಆವರಣವಿದು. ಇಲ್ಲಿಯ ಕಟ್ಟಡಗಳು ವಿಜಯನಗರ ಕಾಲದ ಮಂಟಪಗಳ ವಿಶಿಷ್ಟತೆಯಲ್ಲಿ ರೂಪುಗೊಂಡಿದೆ. ವಿಶ್ವವಿದ್ಯಾಲಯದ ಮುಂಭಾಗಗಳಲ್ಲಿರುವ 'ಅಕ್ಷರ'ದಲ್ಲಿ ಗ್ರಂಥಾಲಯ ಮತ್ತು ವಸ್ತುಸಂಗ್ರಹಾಲಯಗಳಿವೆ. "ಕ್ರಿಯಾಶಕ್ತಿ'' ಆಡಳಿತದ ಕೇಂದ್ರ. ಸಾಂಸ್ಕೃತಿಕ ಚಟುವಟಿಕೆಗಳ ತಾಣ. 'ಭುವನ ವಿಜಯ'. ವಿವಿಧ ನಿಕಾಯಗಳ ವಿವಿಧ ವಿಭಾಗಗಳು 'ತ್ರಿಪದಿ', 'ಕೂಡಲಸಂಗಮ', 'ತುಂಗಭದ್ರ', 'ಘಟಿಕಾಲಯ', 'ಕೇಶೀರಾಜ', 'ಹರಿಹರ', 'ನಾಗವರ್ಮ', 'ಅಕ್ಕ', 'ಅಲ್ಲಮ', 'ನಾದಲೀಲೆ', 'ಕಂಠಪತ್ರ', 'ಜಕ್ಕಣ ಮಂಟಪ' ಮುಂತಾದ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಪಂಪ ಸಭಾಂಗಣ ಸಾಹಿತ್ಯ ಚಟುವಟಿಕೆಗಳ ತಾಣ. "ಸಿರಿಗನ್ನಡ'' ಸಂಶೋಧನಾ ಗ್ರಂಥಾಲಯ "ಸರ್ವಜ್ಞ" ಕಟ್ಟಡದಲ್ಲಿ ಆವರಣದ ಹೃದಯಭಾಗದಲ್ಲಿ ತಲೆಯೆತ್ತಿ ನಿಂತಿದೆ. ಬುಡಕಟ್ಟು ಮತ್ತು ಜಾನಪದ ಅಧ್ಯಯನದ ನೆಲೆಯಾಗಿ ಗ್ರಾಮೀಣ ವಾಸ್ತು ಶೈಲಿಯಲ್ಲಿರುವುದು 'ಗಿರಿಸೀಮೆ'. ಗ್ರೀಕ್ ರಂಗಭೂಮಿಯ ವಿನ್ಯಾಸದಲ್ಲಿ ರೂಪುಗೊಂಡ 'ನವರಂಗ' ಬಯಲು ರಂಗಭೂಮಿ ಕೆರೆಯ ತಟದಲ್ಲಿ ಸುಂದರವಾಗಿ ಮೈದೆಳೆದು ನಿಂತಿದೆ.
to add this to Watch Later

Add to

Loading playlists...