ನಮಗೆ ಸಿಹಿ ಹಂಚುವ ಜೇನು ನೋಣಗಳು, ಹುಲಿಗೆ ಅಹಾರವಾಗುವ ಜಿಂಕೆಗಳು, ಸಾವಿರಾರು ಕಿಲೋಮೀಟರ್ ವಲಸೆ ಹೋಗುವ ಬಾನಾಡಿಗಳು, ಗುಂಪು ಗುಂಪಾಗಿ ಕಾಣಿಸುವ ಆನೆಗಳು, ಶಿಸ್ತಿನ ಸಿಪಾಯಿಗಳಂತೆ ಸಾಲಾಗಿ ಗುಂಪಲ್ಲಿ ಸಾಗುವ ಇರುವೆಗಳು- ಹೀಗೆ ಬಗೆ ಬಗೆಯ ಜೀವಿಗಳು ಗುಂಪಿನಲ್ಲಿ ಬದುಕುತ್ತವೆ. ಆದರೆ ಗುಂಪು-ಜೀವನದ ಈ ಸೊಗಸಿನ ಹಿಂದೆ ಕುತೂಹಲ ಕೆರಳಿಸುವ ವಿಜ್ಞಾನದ ಹಲವು ಕವಲುಗಳಿವೆಯೆಂದು ನೀವು ಬಲ್ಲೀರೆ? ಗುಂಪು-ಜೀವನದ ಹಿಂದಿರುವ ಗಣಿತ, ಗೇಮ್ ಥಿಯರಿ, ವೀಡಿಯೋ ಗೇಮ್ಸ್ ಹಾಗೂ ಇನ್ನಿತರ ಕುತೂಹಲ ಕೆರಳಿಸುವ ಅರಿವಿನ ಕವಲುಗಳನ್ನು ಕನ್ನಡದಲ್ಲೇ ತಿಳಿಯುವ ಮುನ್ನೋಟದ ಇಪ್ಪತ್ತೈದನೇ ಅರಿಮೆ ಮಾತುಕತೆಯನ್ನು ಭಾರತೀಯ ವಿಜ್ಞಾನ ಸಂಸ್ಠೆಯ ಪರಿಸರ ವಿಜ್ಞಾನ ಕೇಂದ್ರದಲ್ಲಿ, ಪ್ರೊಫೆಸರ್.ಆಗಿರುವ ಡಾ.ವಿಶ್ವೇಶ ಗುತ್ತಲ್ ಅವರು ಕೊಟ್ಟರು. ಈ ಮಾತುಕತೆಯ ಮೊದಲ ಭಾಗ ಇಲ್ಲಿದೆ.
Show less