Another beautiful poem by my guru Shri Kuvempu soulfully rendered by Shri P Kalinga Rao
ಇಂದು ಮನುಜ ಜನ್ಮದಲ್ಲಿ
ಬಂದು ಹಾಡುತಿರುವೆನಿಲ್ಲಿ
ಮುಂದಕೆಲ್ಲಿಗೆ??? ಮುಂದಕೆಲ್ಲಿಗೆ???
ಮೊದಲನರಿಯದಾದಿಯಿಂದ
ಆದಿ ತಿಮಿರದುದರಿಂದ... ಮೂಡಿಬಂದೇನೋ
ಯಾರಬಯಕೆ ಎಂಬುದರಿಯೇ
ಏಕೆ ಎಲ್ಲಿ ಎಂಬುದರಿಯೇ... ಮುಂದೆ ಹರಿಯುವೆ
ಮಲಗಿ ಕಲ್ಲು ಮಣ್ಣುಗಳಲಿ
ಜಡಕುಸುತ್ತಿಯಲ್ಲಿ ಬಳಲಿ... ಯುಗಗಳಾದವೋ
ಸತ್ಯಗಳಲಿ ಕನಸಕಂಡು
ಹುಟ್ಟು ಬಾಳು ಸಾವನುಂಡು... ಕಲ್ಪ ಹೋದವೋ
ಮರಳಿ ಮೈಯತಿಳಿದು ತಿರುಗಿ
ಮಿಗಗಳಂತೆ ಮೂಡಿ ಮರುಗಿ... ಬಹಳ ಬಳಲಿದೆ
ಇಂದು ಮನುಜ ಜನ್ಮದಲ್ಲಿ
ಬಂದು ಹಾಡುತಿರುವೆನಿಲ್ಲಿ
ಮುಂದಕೆಲ್ಲಿಗೆ??? ಮುಂದಕೆಲ್ಲಿಗೆ???
What a Golden Voice!... un-parallel ..Thank you for uploading...
ragsanoor 4 months ago