The genius of Shri D R Bendre in the inimitable timbre of Shri Bhimsen Joshi
ಉತ್ತರ ಧೃವದಿಂ ದಕ್ಷಿಣ ಧೃವಕು
ಚುಂಬಕ ಗಾಳಿಯು ಬೀಸುತಿದೆ
ಸೂರ್ಯನ ಬಿಂಬಕೆ ಚಂದ್ರನ ಬಿಂಬವು
ರಂಭಿಸಿ ನಗೆಯಲಿ ಮೀಸುತಿದೆ
ಭೂರಂಗಕೆ ಅಭಿಸಾರಕೆ ಕರೆಯುತ
ತಿಂಗಳು ತಿಂಗಳು ನವೆಯುತಿದೆ
ತುಂಬುತ ತುಳುಕುತ ತೀರುತ ತನ್ನೊಳು
ತಾನೇ ಸವಿಯನು ಸವಿಯುತಿದೆ
ಭೂವನ ಕುಸುಮಿಸಿ ಪುಳಕಿಸಿ ಮರಳಿಸಿ
ಕೋಟಿ ಕೋಟಿಸಲ ಹೊಸಯಿಸಿತು
ಮಿತ್ರನ ಮೈತ್ರಿಯ ಒಸಗೆ ಮಸಗದಿದೆ
ಮರುಕದ ಧಾರೆಯ ಮಸೆಯಿಸಿತು
ಅಕ್ಷಿನಿಮೀಲನ ಮಾಡದ ನಕ್ಷ-
-ತ್ರದ ಗಣ ಗಗನದಿ ಹಾರದಿದೆ
ಬಿದಿಗೆಯ ಬಿಂಬ ಧರದಲಿ ಇಂದಿಗೂ
ಮಿಲನದ ಚಿನ್ಹವು ತೋರದಿದೆ
Link to this comment:
All Comments (0)